ನನಗೂ ಕನ್ನಡ ಹೇಳಿಕೊಡಿ

(ಏಪ್ರಿಲ್‌ ೨೦೨೩, ಕಸ್ತೂರಿ, ಕನ್ನಡ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ನಮ್ಮ ಅಳಿಯನಾಗುವವನು ಅಮೇರಿಕನ್‌ ಎಂದು ತಿಳಿದಾಗ ಮನದಲ್ಲಿ ಮಿಶ್ರ ಪ್ರತಿಕ್ರಿಯೆ. ಅವನು ಸಸ್ಯಾಹಾರಿ ಎಂದು ಮಗಳು ಹೇಳಿದಾಗ ನಮ್ಮ ಸಮಾಧಾನಕ್ಕೆ ಎಣೆಯೇ ಇರಲಿಲ್ಲ. ಇನ್ನೇನು ಬೇಕು, ಇಷ್ಟು ಇದ್ದರೆ ಸಾಕು ಎಂದುಕೊಂಡೆವು. ಆದರೆ ಅವನ ಮನೆಗೆ ಹೋದಾಗ ಇನ್ನೊಂದು ದೊಡ್ಡ ಅಚ್ಚರಿ ಕಾದಿತ್ತು. ಕನ್ನಡ ಮಾತನಾಡುವುದನ್ನು ಕಲಿಯುವುದಕ್ಕೆ Amazon ನಿ೦ದ ಆಗಲೇ ಪುಸ್ತಕವನ್ನು ಕೊ೦ಡುಕೊಂಡಿದ್ದನು.

‘ಗೂಬೆ’, `ಇಲ್ಲ ಎಂದು’ ಅಲ್ಲಿ ಇಲ್ಲಿ ಒಂದೊಂದು ಶಬ್ದಗಳನ್ನು ಮಗಳು ಹೇಳಿಕೊಟ್ಟಿದ್ದಳು. ಪ್ರತಿದಿನ ತಪ್ಪದಂತೆ. Spoken Kannada ಪುಸ್ತಕವನ್ನು ಓದುವುದು ಅವನ ಒಂದು ಅಭ್ಯಾಸ. ನಾನೂ ಆ ಪುಸ್ತಕವನ್ನು ತೆಗೆದುನೋಡಿದೆ. ಕನ್ನಡವನ್ನು ಬರೆಯುವುದಾಗಲೀ ಅಥವಾ ಓದುವುದಾಗಲೀ ಕಲಿಯಲು ಆ ಪುಸ್ತಕದಿ೦ದ ಸಾಧ್ಯವಿರಲಿಲ್ಲ. ಬರೀ ಮಾತನಾಡುವುದನ್ನು ಕಲಿಯಬಹುದಿತ್ತು. ಅದೂ, ಕನ್ನಡವನ್ನು English ನಿಂದ ಕಲಿಯಬಹುದಿತ್ತು. ಎಷ್ಟು ಸುಲಭ ಎಂದುಕೊಂಡೆ!

ಅಮೇರಿಕಾಗೆ ಬರುವ ಮೊದಲ ಮೂರು ತಿ೦ಗಳು, ಒಬ್ಬ ಮಲೆಯಾಳಂ ಮಾತನಾಡುವ, ೩ ನೇ ತರಗತಿಯ ಹುಡುಗಿಗೆ online ನಲ್ಲಿ ಕನ್ನಡ ಓದಿ, ಬರೆಯುವುದನ್ನು ಕಲಿಸುತ್ತಿದ್ದೆ. ಅದೂ Corona ಸಮಯದಲ್ಲಿ. ಹುಡುಗಿ ತುಂಬಾ ಜಾಣೆ. ಆದರೂ ಶಾಲೆಯಲ್ಲಿ ಎಲ್ಲವೂ Online Class ಆದ್ದರಿ೦ದ ಕಲಿಕೆಯಲ್ಲಿ ಹಿ೦ದೆ ಇದ್ದಾಳೆ ಎಂದು ಅವಳ ತಾಯಿ ಹೇಳುತ್ತಿದ್ದರು. ಆ ಹುಡುಗಿ, ಮೊದಮೊದಲು ಕನ್ನಡದ ಕೆಲವು ಅಕ್ಷರಗಳನ್ನು ಉಜ್ಜಾರ ಮಾಡಲು ಕಷ್ಟಪಡುತ್ತಿದ್ದಳು. ಉದಾಹರಣೆಗೆ ‘ಳ’ ಇದ್ದಲ್ಲಿ ಅದನ್ನು ‘ಲ’ ಎಂದೂ `ತ’ ಇದ್ದಲ್ಲಿ ‘ದ’ ಎಂದೇ ಉಚ್ಚರಿಸುವುದು.

ಇತರ ಭಾಷೆ ಕಲಿಯುವಲ್ಲಿ, ಮಾತೃಭಾಷೆಯ ಪ್ರಭಾವ ಎಷ್ಟರಮಟ್ಟಿಗೆ ಇರುತ್ತದೆ ಎನ್ನುವುದು ಒಂದು ಪ್ರಮುಖ ಅಂಶ. ಎರಡನೆಯದಾಗಿ, ಕಲಿಯುವಲ್ಲಿನ ಆಸಕ್ತಿ, ಕಲಿಸುವ ಕಲೆ, ಈ ಎಲ್ಲಾ ಅಂಶಗಳು ಹೊಂದುವುದಾದರೆ, ಭಾಷೆ ಕಲಿಯುವ ಹಾಗೂ ಕಲಿಸುವ ಕೆಲಸವನ್ನು ಸಂಭ್ರಮಿಸಬಹುದು. American ಉಚ್ಚಾರಣೆಗೆ ಕನ್ನಡದ ಅಕ್ಷರಗಳು ಹೇಗೆ
ಹೊಂದಿಸುವುದು? ಈ ಅನುಭವವನ್ನು ಇಲ್ಲಿ ಹಂಚಿಕೊಡಿದ್ದೇನೆ.

ಬರೆದಿರುವುದನ್ನೇ ಹೇಳುವುದು

Americanನ್ನರ ಭಾಷೆ English ಆಗಿದ್ದರೂ ಸಹ, ಉಚ್ಛಾರಣೆಯಲ್ಲಿ ನಾವು ಮಾತನಾಡುವ English ಗಿ೦ತ ತುಂಬಾ ವಿಭಿನ್ನ. ಮೊದಲನೆಯದಾಗಿ fast ಆಗಿ ಮಾತನಾಡುತ್ತಾರೆ. ಬಹಳ ಗಮನವಿಟ್ಟು ಕೇಳಿಸಿಕೊಳ್ಳೋಣವೆ೦ದರೂ, ಕೆಲವು ಸಲ ಪದಗಳು ಅರ್ಥ ಆಗುವುದಿಲ್ಲ. ಸನ್ನಿವೇಶಗಳಿಗನುಗುಣವಾಗಿ ಒಂದೊಂದು ಸಲ ಅರ್ಥ ಮಾಡಿಕೊಳ್ಳುತ್ತಿದ್ದೆ. ನನ್ನ ಮಗನಿಗೆ ಹೊಸದಾಗಿ ಅಮೇರಿಕಾದ ಇನ್ನೊಂದು ರಾಜ್ಯದಲ್ಲಿ ಕೆಲಸ ಸಿಕ್ಕಿತ್ತು. ಆದರೆ ಅಲ್ಲಿ ಅವನ ಮನೆಗೆ Internet connection ಸಿಕ್ಕಿರಲಿಲ್ಲ. ಆಗ ನಾವು ಅಳಿಯನ ಮನೆಯಲ್ಲೇ ಇದ್ದೆವು. Did he get internet? ಎಂದು ಅಳಿಯ ನನಗೆ ಕೇಳಿದಾಗ, Internet ಪದ Inneneth ಎ೦ದು ಕೇಳಿಸಿತು. ನನಗೆ ಅರ್ಥ ಆಗಲಿಲ್ಲ. ಎರಡು ಮೂರು ಬಾರಿ ಹೇಳಿದ ಮೇಲೆ ತಿಳಿಯಿತು. ನಾವು ‘ಇಂಟರ್ನೆಟ್‌’ ಅಂತ ‘t’ ಯನ್ನು ಒತ್ತಿ ಹೇಳುತ್ತೇವೆ. ಆದರೆ ಅವನ ಉಜಚ್ಛಾರಣೆಯಲ್ಲಿ ‘t’ ಯ ಸುಳಿವೇ ಇರಲಿಲ್ಲ!

ಅವರ ಇಂಗ್ಲೀಷ್‌ ಉಚ್ಛಾರಣೆ ಹೀಗಿರುವಾಗ, ನಮ್ಮ ಟ ಮತ್ತು ತ, ಲ ಮತ್ತು ಳ, ನ ಮತ್ತು ಣ, ದ ಮತ್ತು ಡ ಗಳ ಉಜ್ಭಾರಣೆಗಳಲ್ಲಿ ಅವರು ವ್ಯತ್ಯಾಸ ಕಂಡುಕೊಳ್ಳುವುದು ಒಂದು ಸಾಧನೆಯೇ ಎಂದೆನಿಸಿತು. ಅದೂ ಅಲ್ಲದೆ. ನಮ್ಮ ಕನ್ನಡದಲ್ಲಿರುವಷ್ಟು ಅಕ್ಷರಗಳು ಇಂಗ್ಲೀಷಿನಲ್ಲಿ ಇಲ್ಲ. ಮೊದಲು ಅಕ್ಷರಗಳನ್ನು ಬರೆಯುವುದು, ಓದುವುದು ಕಲಿತಲ್ಲಿ ನಂತರ ಉಚ್ಚಾರಣೆಯ ಕಡೆ ಗಮನಹರಿಸುವುದು ಸುಲಭವಲ್ಲದೆ, ಉಚ್ಚಾರಣೆ ಮಾಡುವುದರಲ್ಲಿ ಪರಿಪೂರ್ಣತೆ ಕಂಡುಕೊಳ್ಳಬಹುದು ಎನಿಸಿತು.

ಕಲಿಯುವ ಅವಕಾಶ

ಕೆಲವರು ಕೇಳಿಯೇ ಭಾಷೆಯನ್ನು ಸುಲಲಿತವಾಗಿ ಕಲಿಯುತ್ತಾರೆ. ಕೆಲವರು ಬರೆಯುವುದು/ಓದುವುದರಿಂದ. ಪ್ರಾರಂಭಿಸಿ ನಂತರ ಮಾತನಾಡುವುದನ್ನು ಸುಲಭವಾಗಿಸಿಕೊಳ್ಳುತ್ತಾರೆ. ‘ನಾನು ಬರೆಯುವುದನ್ನು ಸುಲಭವಾಗಿ ಕಲಿಯುತ್ತೇನೆ. ಆ ರೀತಿಯಲ್ಲಿಯೇ ಒಂದು ಪ್ರಯತ್ನ ಪಡುತ್ತೇನೆ’ ಎಂದು ಆಸಕ್ತಿ ತೋರಿಸಿದ ಜೇಸನ್‌. ಇದು ನನಗೂ ಸರಿ ಎನ್ನಿಸಿತು. ಪಾಠ ಅಕ್ಷರಮಾಲೆಯಿ೦ಂದ ಪ್ರಾರಂಭವಾಯಿತು. ಅ ಯಿಂದ ಅಃ ದವರೆಗೆ ಏನೂ ತೊಂದರೆ ಆಗಲಿಲ್ಲ. ಆದರೆ ಕ, ಖ,ಗ, ಘ ಶುರುವಾದಂತೆ ಪ್ರಶ್ನೆಗಳ ಸಂಖ್ಯೆಗಳೂ ಹೆಚ್ಚತೊಡಗಿತು. ಇಲ್ಲಿ ಹೇಳಿಕೊಡುತ್ತಿದ್ದ ನನಗೂ ಕಲಿಯುವ ಒಂದು ಅವಕಾಶ ಒದಗಿತ್ತು.

ಆಸಕ್ತಿಯನ್ನು ಕಾಪಾಡಿಕೊಳ್ಳುವ ಬಗೆ :

ಹೊಸ ವಿಷಯಗಳನ್ನು ಕಲಿಯುವಾಗ, ಗೊತ್ತಿರುವ ವಿಷಯದಿಂದ ಕಲಿಯಲು ಪ್ರಯತ್ನಿಸುತ್ತೇವೆ. ಇಲ್ಲಿ ಮುಖ್ಯವಾಗಿ ಮುಂಚೆಯೇ ಕಲಿತಿದ್ದನ್ನು ಬಿಡಲು ಸಾಧ್ಯವಾಗದೆ ಹೊಸದನ್ನು ಅದಕ್ಕೆ ಹೋಲಿಸುತ್ತಾ, ಈ ಭಾಷೆ ಏಕೆ ಈ ರೀತಿ ಇದೆ ಎನ್ನುವ ಅವನ ಮೊದಲ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸದಿಂದ, ಪಾಠ ಅಷ್ಟು ಸರಾಗವಾಗಿ ಸಾಗುತ್ತಿರಲಿಲ್ಲ. ಕಲಿಕೆಯಲ್ಲಿ, ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋಗಿ ಅದರಲ್ಲೇ ಕಳೆದುಹೋಗುವ ಪ್ರಸಂಗ ಹಾಗೂ ಕಲಿಕೆಯಲ್ಲಿ ಆಸಕ್ತಿ ಕಡಿಮೆ ಆಗುವ ಸಾಧ್ಯತೆಗಳು ಹೆಚ್ಚು ಇತ್ತು.

American ಉಚ್ಚಾರಣೆಯಿಂದ ಕನ್ನಡದ ಅಕ್ಷರಗಳನ್ನು ಉಚ್ಚರಿಸಲು ಹೋದಾಗ ಕೆಲವು ವೇಳೆ ಆ ಪದದ ಅರ್ಥವೇ ಬದಲಾಗುತ್ತಿತ್ತು. ಉದಾಹರಣೆಗೆ ಹಾಲು, ಹಾಳು ಈ ಪದಗಳಲ್ಲಿ ಲ ಮತ್ತು ಳ ಅಕ್ಷರಗಳು ಅಮೇರಿಕನ್‌ ಉಜ್ಜಾರಣೆಯಲ್ಲಿ ಒಂದೇ ಆದರೂ ಅಕ್ಷರಗಳು ಹಾಗೂ ಪದಗಳ ಅರ್ಥಗಳು ಬೇರೆಬೇರೆಯದು ಎಂಬುದನ್ನು ಗಮನಿಸಲು ಶುರುಮಾಡಿದ. ಅದೇ ರೀತಿ ದ ಮತ್ತು ಡ ಗಳನ್ನು ಬೇರೆಬೇರೆಯಾಗಿ ಉಚ್ಚರಿಸಲು ಹರ ಸಾಹಸ ಮಾಡಿದರೂ ಅಷ್ಟು ಬೇಗ ಹೇಳಲು ಆಗುತ್ತಿರಲಿಲ್ಲ.

ಅವನಾದರೋ ಸ್ವಭಾವತಃ ಹಿಡಿದ ಕೆಲಸ ಬಿಡುವವನಲ್ಲ, ಕಣ್ಣಿಗಾದರೂ ಅಕ್ಷರಗಳು ಬೇರೆ ಬೇರೆ ಇದೆ ಎ೦ದು ತಿಳಿಯುತ್ತಿತ್ತು, ನನಗೇಕೆ ಸುಲಭವಾಗಿ ಹೇಳಲು ಬರುತ್ತಿಲ್ಲ ಎಂದು ಹಲವು ಸಲ ಅವನು ಬೇಸರಪಟ್ಟಿಕೊಳ್ಳುತ್ತಿದ್ದ. ಅಭ್ಯಾಸದ ಮೇಲೆ ಮುಂದೆ ಸರಿಯಾಗಿ ಉಚ್ಚರಿಸಲು ಬರುತ್ತದೆ ಎಂದು ನಾನು ಸಮಾಧಾನ ಹೇಳುತ್ತಿದ್ದೆ.

ಮೊದಲು ಬರವಣಿಗೆಯಲ್ಲಿ ಹಿಡಿತ ಕಂಡುಬರಲು ಶುರುವಾಯಿತು. ‘ದಡ್ಡ’ಎಂಬ ಶಬ್ದವನ್ನು ಬರೆದಾಗ ಅದು ‘ದದ್ದ’ ವಾಗದೇ ಸರಿಯಾಗಿರುತ್ತಿತ್ತು. ಬರವಣಿಗೆ ಬರುತ್ತಿದೆಯಲ್ಲಾ, ಓದುವುದು, ಮಾತನಾಡುವುದು ನಿಧಾನವಾಗಿ ಬರುತ್ತದೆ. ಎ೦ಬ ನಂಬಿಕೆ ಇತ್ತು. ಪಾಠ ಸ್ವಲ್ಪ ವೇಗವಾಗಿ ಸಾಗುತ್ತಿತ್ತು. ಅದಲ್ಲದೆ ಅವನು ಬರೆಯುವುದನ್ನು ಪೂರ್ತಿ ಕಲಿಯುವವರೆಗಾದರೂ ನಾನು American accent ಅನ್ನು ಹೇಗಿದೆಯೋ ಹಾಗೆಯೇ ಒಪ್ಪಿಕೊಳ್ಳುವುದು ಸರಿ ಎನಿಸಿತ್ತು.

ಜೇಸನ್‌ Spanish ಭಾಷೆಯನ್ನು ಸ್ವತಃ ಕಲಿಯುತ್ತಿದ್ದ. Spanish, ಇಂಗ್ಲೀಷ್‌ ಮಾತನಾಡುವವರಿಗೆ ಅತಿ ಸುಲಭವಾಗಿ ಕಲಿಯಬಹುದಾದ ಭಾಷೆ. ಆದರೆ, ಅದೇ American ಉಚ್ಚಾರಣೆಯಿ೦ದ ಕನ್ನಡದಅಕ್ಷರಗಳನ್ನು ಉಚ್ಚರಿಸಲು ಹೋದಾಗ ಕೆಲವು ವೇಳೆ ಪದಗಳ ಅರ್ಥಗಳೇ ಬದಲಾಗುತ್ತವೆ. ಕನ್ನಡದ ಅಕ್ಷರಗಳು English ಗೆ ಹೋಲಿಸಿದರೆ ಸಂಪೂರ್ಣ ವಿಭಿನ್ನ ಎನ್ನುವುದು ಅರಿವಾಗತೊಡಗಿತು. ಇಂಗ್ಲೀಷಿನಲ್ಲಿ ಹೇಳುವಂತೆ ‘unlearning’ ಮಾಡಬೇಕು. ಪ್ರತಿ ಭಾಷೆಗೂ ಅದರದೇ ಆದ ವಿಶಿಷ್ಟತೆ ಇರುತ್ತದೆ ಎಂದು ಅವನಿಗೆ ಮನದಟ್ಟು ಆಗತೊಡಗಿದ್ದು ನನಗೂ ಸಮಾಧಾನ ತಂದುಕೊಟ್ಟಿತ್ತು.

ತಮಾಷೆ ಹುಡುಗ :

Comedy ಸಿನಿಮಾ ಅಂದ್ರೆ ಇಷ್ಟ. ಆದರೆ ಅನೇಕ ಒಳ್ಳೆ ಕನ್ನಡ ಸಿನಿಮಾಗಳಿಗೆ Subtitles ಇರೋದೆ ಇಲ್ಲ. ಅಂತೂ ಕಷ್ಟಪಟ್ಟು ‘ಇಕ್ಕಟ್ಟು’ ಸಿನಿಮಾ ಹುಡುಕಿದೆವು. ಸಿನಿಮಾ ತುಂಬಾ ಇಷ್ಟ ಆಯ್ತು. ಮೆಲುಕು ಹಾಕಲು ಸಿಕ್ಕ ಹೆಸರು ‘ಡೂಡ್‌ ಮಗ’. ಅಕ್ಷರಮಾಲೆಗಳನ್ನು ಕಲಿತ ನಂತರ, ಅಕ್ಷರಗಳಿಂದ ಪದಗಳನ್ನು ಮಾಡುವ ಸರದಿ. ಮ ಮತ್ತು ಗ ಸೇರಿಸಿ ಪದ ಮಾಡುವುದು. “ಮಗʼ ಪದ ಓದಲು ಬಂದಾಗಲೆಲ್ಲಾ, ಅವನಿಗೆ ‘ಡೂಡ್‌ ಮಗʼ ನ ನೆನಪಾಗುತ್ತಿತ್ತು. ಪಾಠದ ಜೊತೆ ಈ ರೀತಿ ತಮಾಷೆ ಸೇರಿ, ಪಾಠ ನಿರಾಳವಾಗಿ ಸಾಗತೊಡಗಿತ್ತು.

America ದಲ್ಲಿರುವ ನನ್ನ cousin, ಜೇಸನ್‌ಗೆ ಕನ್ನಡ ಪುಸ್ತಕಗಳನ್ನು ಕಳಿಸಿದ್ದಕ್ಕೆ ‘Thanks ಕಣೇ’ ಎಂದು ನಾನು message ಮಾಡಿದ್ದನ್ನು ಅವನಿಗೆ ತೋರಿಸಿದೆ. Thanks ಆಂದ್ರೆ ಧನ್ಯವಾದಗಳು, ಆದರೆ ಈ ಕಣೇ ಎಂದರೆ ಏನು? ಎಂದನು. ನನಗೆ ಗೊತ್ತಿದ್ದಷ್ಟು ಹೇಳಿದರೂ ನನ್ನ ಮಗಳು ‘ಇಂಗ್ಲೀಷ್ನಲ್ಲಿ ಹುಡುಗರಿಗೆ bro ಅನ್ನಲ್ವಾ ಹಾಗೆ ಕನ್ನಡದಲ್ಲಿ ಹುಡುಗಿಯರಿಗೆ’ ಎಂದಾಗ ‘ಸರಿ’ ಅಂದನು.

Weekends ನಲ್ಲಿ Trailwalk ಗೆ ಹೋಗುತ್ತಿದ್ದೆವು. ದಟ್ಟವಾದ ಮರಗಳ ಮಧ್ಯೆ walk ಮಾಡಲು ದಾರಿ ಇರುತ್ತದೆ. ಹೋಗುವಾಗ ಪರಿಸರಕ್ಕೆ ಸಂಬಂಧಿಸಿದಂತೆ ಪದಗಳು ಅಂದರೆ ಮರ, ಗಿಡ, ಮಣ್ಣು, ಬೆಟ್ಟ ಹಾಗೂ ಎರಡೆರಡು ಪದವಿರುವ ‘ಎಷ್ಟು ಚೆನ್ನಾಗಿದೆ’, ‘ಡುಮ್ಮ ಮರ’ ಅ೦ತ ಅನೇಕ ಪದಗಳನ್ನು ಕಲಿತನು. ಅದಲ್ಲದೆ keep quiet, unacceptable, dumb ಅನ್ವುವುದಕ್ಕೆ ಕನ್ನಡ ಪದಗಳನ್ನು ಹೇಳಿಕೊಡಿ, ಸುಮಳ ಜೊತೆ ಮಾತನಾಡುವಾಗ ಸಹಾಯಕ್ಕೆ ಬರುತ್ತದೆ ಎಂದು ಸುಮ್ಮನಿರು, ಒಪ್ಪಲ್ಲ, ಪೆದ್ದು, ಕೆಟ್ಟದಾಗಿದೆ ಎನ್ನುವ ಪದಗಳನ್ನು ತನ್ನ ಶಬ್ದಬಂಡಾರಕ್ಕೆ ಸೇರಿಸಿಕೊಂಡ ತಮಾಷೆ ಹುಡುಗ.

ನಮ್ಮ ಕಲ್ಯಾಣಿ :

ನವು ಇದ್ದಷ್ಟು ದಿನ, ಪ್ರತಿ ನಿತ್ಯ ೫, ೬ ಹೊಸ ಪದಗಳ ಅರ್ಥ ತಿಳಿದು, ಬರೆಯುವುದನ್ನು ಕಲಿಯುವುದು, ಪುನರಾವರ್ತನೆ ಮಾಡಿಕೊಳ್ಳುವುದಷ್ಟೇ ಅಲ್ಲ, ಅವುಗಳನ್ನು ಸಂದರ್ಭ ಬಂದಾಗ ನೆನಪಿಸಿಕೊಂಡು ಹೇಳುವುದು ಖುಷಿ ಕೊಡುತ್ತಿದ್ದ ವಿಷಯ. Gift items ತೆಗೆದುಕೊಂಡು ಹೋಗಿದ್ದೆವು. ಅದರಲ್ಲಿ ಒಂದು ಗಣೇಶನ ವಿಗ್ರಹ

journey ಯಲ್ಲಿ ಸ್ವಲ್ಪ ಒಡೆದುಹೋಗಿತ್ತು ಎಸೆಯಲು ಮನಸ್ಸು ಇರಲಿಲ್ಲ. ಅವನ yard ನಲ್ಲೇ ಇದ್ದ ಕೊಳದ ಹತ್ತಿರ ಇಡಲು ಹೇಳಿದೆವು. ‘ಈಗ ಈ ಕೊಳ ನಮ್ಮ ಕಲ್ಕಾಣಿ’ ಎಂದಿದ್ದನು. ಕಲ್ಯಾಣಿ ಎನ್ನುವ ಒಂದು ಪದದಿ೦ದ ಆ ಕೊಳವನ್ನು ನೋಡುತ್ತಿದ್ದ ದೃಷ್ಟಿಕೋನವೇ ಬದಲಾಗಿತ್ತು.

ಒತ್ತಕ್ಷರ ಮತ್ತು ಪಶ್ನೆಗಳ ಸುರಿಮಳೆ :

೧) `ಕ’ ಅಕ್ಷರದ ಮುಂದಿನದು ‘ಖ’ ಒಪ್ಪಿದೆ, ಆದರೆ ಒತ್ತಕ್ಷರದಲ್ಲಿ ‘ಕ್ಕ’ ಏಕೆ? ನನಗೆ ಎಲ್ಲವೂ ಹೆಚ್ಚುಕಡಿಮೆ ಒಂದೇ ರೀತಿ ಕೇಳುತ್ತದೆ.

೨) ಕನ್ನಡದಲ್ಲಿ ಇಷ್ಟೊಂದು ಅಕ್ಷರಗಳು ಏಕೆ?

೩) ‘ಎಲೆ’ ಮತ್ತು ‘ಯೆಲೆ’ ಗಳಲ್ಲಿ ಯಾವುದು ಸರಿ ಮತ್ತು ಏಕೆ?

೪) ಉಯ್ಯಾಲೆ ಮತ್ತು ಉಯಾಲೆ ಉಚ್ಜಾರದಲ್ಲಿ ಏನೂ ವ್ಯತ್ಕಾಸ ಗೊತ್ತಾಗುತ್ತಿಲ್ಲ. ಈ ರೀತಿ ಏಕೆ? ಎನ್ನುವುದು ಇನ್ನೊಂದು ಪ್ರಶ್ನೆ. ನಾನು ಅಕ್ಷರ ಮತ್ತು ಪದಗಳನ್ನು ೨, ೩ ಬಾರಿ ಹೇಳಿ, ಹೇಳುವಾಗ ಗಮನವಿಟ್ಟು ಕೇಳಿಸಿಕೊಳ್ಳಲು ಮತ್ತು ತುಟಿ, ನಾಲಿಗೆಯ ಚಲನೆಯನ್ನು ಗಮನಿಸಲು ಅವನಿಗೆ ಹೇಳುತ್ತಿದ್ದೆ. Stress ಮಾಡಿ ಹೇಳಿದಾಗ ಶಬ್ದಗಳಲ್ಲಿ ವ್ಯತ್ಯಾಸ ಕಂಡಿತು ಅಂದನು. ಅಲ್ಲಿಗೆ ನಾನೂ ಗೆದ್ದೆ ಎಂದುಕೊಂಡೆ.

೫) Bear ಗೆ ಕನ್ನಡ ಪದ ಏನು ಎನ್ನುವ ಪ್ರಶ್ನೆಗೆ, ಕರಡಿ ಅಂತ ಹೇಳಿದ್ದು ಅವನಿಗೆ Carrroty ಅ೦ತ ಕೇಳಿಸಿತ್ತು. ಡಿ ಯನ್ನು ಟಿ ಎಂದು ಹೇಳುವುದು. ಕನ್ನಡದಲ್ಲಿ ಬರೆದು ತೋರಿಸಿದಾಗ ಅವನಿಗೆ ಸ್ಪಷ್ಟವಾಗಿ ತಿಳಿಯಿತು. ನನಗೆ ಬರವಣಿಗೆ ಬಂದಿರುವುದರಿಂದ ‘ಕರಡಿ’ ಯ ಉಚ್ಚಾರಣೆ ಈಗ ಸರಿ ಮಾಡಿಕೊಳ್ಳುತ್ತೇನೆ ಎಂದ. ಅವನ ಸಂತೋಷ, ಮುಖದಲ್ಲಿ ತೋರುತ್ತಿತ್ತು.

ಬರವಣಿಗೆಗೆ ಸಂಬಂಧಿಸಿದಂತೆ (ವು ಮ), (ಔ, ಜಾ) ಮತ್ತು (ಛ, ಭ) ಗಳನ್ನು ಬರೆಯುವಾಗ ಅದಲು ಬದಲು ಆಗದಂತೆ ಎಚ್ಚರವಹಿಸಬೇಕು, ನಾನು ತು೦ಬಾ ಜಾಣ, ಬೇಗ ಕಲಿಯುತ್ತೇನೆ ಎಂದು ತಿಳಿದಿದ್ದೆ. ಈಗ ತಿಳಿಯಿತು, ಭಾಷೆಯನ್ನು ನಿಯಂತ್ರಿಸುವ ಮೆದುಳಿನ ಎಡಭಾಗಕ್ಕೆ ಇನ್ನೂ ಹೆಚ್ಚು ಕೆಲಸ ಕೊಟ್ಟು ಚುರುಕುಗೊಳಿಸಿಕೊಳ್ಳಬಹುದು. ಇದು ಒಳ್ಳೆಯ ಅವಕಾಶ’ ಎಂದು ಕಲಿಯುವುದನ್ನು ಒ೦ದು ಸವಾಲಾಗಿ ತೆಗೆದುಕೊಂಡ ಈ ಹುಡುಗ. American ನೆಲದಲ್ಲಿ ಕುಳಿತು ಕನ್ನಡದ ಬಗೆಗೆ ಅ೦ದು ಹೆಮ್ಮೆ ಪಡುವಂತಾಗಿತ್ತು.

ಕಲಿತ ವಿಷಯಗಳು :

ಕೃಷ್ಣ’ ಪದವನ್ನು ಸರಿಯಾಗಿ ಉಚ್ಚರಿಸಬೇಕು. ಸಾಮಾನ್ಯವಾಗಿ ಇಂಗ್ಲೀಷ್‌ನಲ್ಲಿ Krushna ಬದಲು Krishna ಎ೦ದು ಇರುತ್ತದೆ. ಕನ್ನಡ ಬರೆಯುವುದನ್ನು ಕಲಿತಿರುವುದರಿಂದ, English ನಲ್ಲಿ ಈ ರೀತಿ ಏಕೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಎಲ್ಲಿ ಹುಡುಕಬೇಕು?, ಕಲಿಕೆಯಲ್ಲಿ, ಒಂದು ಭಾಷೆ ಇನ್ನೊಂದು ಭಾಷೆಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂದೆಲ್ಲಾ ವಿಷಯಗಳು ಚರ್ಚೆಗೆ ಬಂದವು

ಅಂತೂ ಕನ್ನಡ ಬರೆಯುವುದು, ಓದುವುದು ಕಲಿತಾಯ್ತು. ಮಾತನಾಡಲೂ ಶುರು ಮಾಡಿಯಾಯ್ತು. Mobile ನಲ್ಲಿ ಕನ್ನಡ keyboard ಹಾಕಿಕೊಂಡು, ಹುಟ್ಟುಹಬ್ಬ, ಇತರೆ ಹಬ್ಬಗಳಿದ್ದರೆ ಶುಭಾಶಯಗಳನ್ನು ಹೇಳುವುದು, Thanks ಎಂದು message ಮಾಡುವ ಜಾಗಗಳಲ್ಲಿ ತಪ್ಪದೆ “ಧನ್ಯವಾದಗಳು’ ಎ೦ದು ಹೇಳುವುದು ರೂಢಿಯಾಗಿಹೋಯಿತು. ಹೊಸದಾಗಿ ಬರುತ್ತಿದ್ದ ಕೆಲವು ಪ್ರಶ್ನೆಗಳಿಗೆ ಅವನಿಗೇ ಉತ್ತರ ದೊರಕುತ್ತಿತ್ತು. ಉದಾಹರಣೆಗೆ, ಇಂಗ್ಲೀಷ್‌ ಭಾಷೆಯ ‘very nice’ ನಲ್ಲಿ very ಯನ್ನು ಹೇಳುವಾಗ ನೀವು ʼರಿʼ ಅನ್ನು ಏಕೆ ಒತ್ತಿ ಹೇಳುತ್ತೀರಿ ಅ೦ತ ಗೊತ್ತಾಯಿತು, ಕನ್ನಡದ ‘ತುಂಬಾ ಚೆನ್ನಾಗಿದೆ’ ಎಂದು ಹೇಳುವಾಗ ‘ತುಂಬಾ’ ಅನ್ಫುವುದನ್ನೂ ಹಾಗೆಯೇ ಹೇಳುತ್ತೀರಿ, ಅಂದಾಗ ಕನ್ನಡದಲ್ಲಿ ಪದಗಳಿಗೆ ನಾವು ಎಷ್ಟು ಜೀವ ತುಂಬಿ ಹೇಳುತ್ತೇವೆ ಎಂದು ತಿಳಿಯಿತು. ಈ ರೀತಿ ಪ್ರಶ್ನೆ, ಉತ್ತರಗಳ ಸಾಗರದಲ್ಲಿ ಮುಳುಗಿ ಕನ್ನಡವನ್ನು ಕಲಿಯುತ್ತಿದ್ದುದು ಅವನಲ್ಲ, ನಾನು!

Comments

No comments yet. Why don’t you start the discussion?

Leave a Reply

Your email address will not be published. Required fields are marked *